ಜನ ಪ್ರತಿನಿಧಿಗಳ ಹಾಗೂ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳ ನಿರ್ಲಕ್ಷ್ಯತನವನ್ನು ಖಂಡಿಸಿ ರೈತರ ಬೆಳೆಗಳಿಗೆ ನೀರು ಹರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತಸಂಘ ಮತ್ತು ಪ್ರಗತಿ ಪರ ಸಂಘಟನೆಗಳ ಸಮನ್ವಯ ಸಮಿತಿ ಸೆ.9ರ ಮಂಗಳವಾರ ಬೆಳಿಗ್ಗೆ 10 ಗಂಟೆಗೆ ಬೃಹತ್ ರಸ್ತೆ ತಡೆ ಚಳುವಳಿಯನ್ನು ಮದ್ದೂರು ತಾಲ್ಲೂಕು ಭಾರತೀನಗರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ರೈತಸಂಘದ ಜಿಲ್ಲಾಉಪಾಧ್ಯಕ್ಷ ಕೆ.ರಾಮಲಿಂಗೇಗೌಡ ತಿಳಿಸಿದ್ದಾರೆ. ಭಾರತೀನಗರದಲ್ಲಿ ಕೆ.ರಾಮಲಿಂಗೇಗೌಡ ಅವರು ಮಾತನಾಡಿ, ಕಾವೇರಿ ನೀರಾವರಿ ನಿಗಮದ ವ್ಯಾಪ್ತಿಗೆ ಬರುವ ಲೋಕಸರ ಮತ್ತು ಕೆ.ಎಂ.ದೊಡ್ಡಿಯ ಕೊನೆಯ ಭಾಗದ ರೈತರಿಗೆ, ರೈತರ ಬೆಳೆಗಳಿಗೆ ಸಕಾಲಕ್ಕೆ ನಾಟಿಮಾಡಲು ನೀರು ಹರಿಸದೆ ತಾರತಮ್ಯ ಎಸಗುತ್ತಿರುವ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳ ಮತ್ತು