ಮೈಸೂರಿನ ಅಶೋಕ ರಸ್ತೆಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಬಿಜೆಪಿ ಮುಖಂಡರಾದ ಗಿರಿಧರ್ ಅವರು ದಸರಾ ಉದ್ಘಾಟಕರಾಗಿ ಆಯ್ಕೆಯಾಗಿರುವ ಬೂಖರ್ ಪ್ರಶಸ್ತಿ ವಿಜೇತರಾದ ಬಾನು ಮುಷ್ತಾಕ್ ಅವರ ಆಯ್ಕೆಗೆ ನಮ್ಮ ವಿರೋಧವಿಲ್ಲ ಆದರೆ ಒಬ್ಬ ಹಿಂದೂ ಆಗಿ ಹಿಂದೂ ಸಂಪ್ರದಾಯಕ್ಕೆ ಬೆಲೆ ಕೊಡದವರನ್ನು ನಾವು ಒಪ್ಪುವುದಿಲ್ಲ ಅವರ ಸಾಧನೆ ಅಪಾರ ಇರಬಹುದು ಆದರೆ ತಾಯಿ ಚಾಮುಂಡಿ ವಿಷಯಕ್ಕೆ ಬಂದರೆ ಭಕ್ತಿ ಭಾವದಿಂದ ಅವರು ತಾಯಿಯನ್ನು ಆರಾಧಿಸಿದರೆ ದಸರಾವನ್ನು ಉದ್ಘಾಟಿಸಲಿ ಇಲ್ಲದಿದ್ದರೆ ಅವರನ್ನು ನಾವು ವಿರೋಧಿಸುತ್ತೇವೆ ಎಂದು ಮಾತನಾಡುತ್ತಾ ಮುಂದುವರೆದು ಮಾತನಾಡಿದ ಅವರು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಚಾಮುಂಡಿ ಬೆಟ್ಟ ಹಿಂದುಗಳ ಆಸ್ತಿಯಲ್ಲ ಎಂಬ ವಿವಾದಾತ್ಮಕ ಹೇಳಿಕೆಯನ್ನು ನಾವು ಖಂಡಿಸುತ್ತೇವೆ.