ಬಣಜಿಗ ಸಮುದಾಯ 2ಎ ಸೇರ್ಪಡೆಗಾಗಿ ಸಂಘಟಿತ ಹೋರಾಟ ಅನಿವಾರ್ಯ ಎಂದು ಕರ್ನಾಟಕ ರಾಜ್ಯ ಬಣಜಿಗ ಕ್ಷಮಾಪನದ ಸಂಘದ ರಾಜ್ಯ ಉಪಾಧ್ಯಕ್ಷ ಅಂದಪ್ಪ ಜವಳಿ ಅವರು ಸಲಹೆ ನೀಡಿದರು. ಪಟ್ಟಣದ ವಿವಿಐಪಿ ಗೆಸ್ಟ್ ಹೌಸ್ ನಲ್ಲಿ ಶನಿವಾರ ಮಧ್ಯಾಹ್ನ 2ಕ್ಕೆ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಈ ವೇಳೆ ವಿಜಯಕುಮಾರ ಬೋಳೆಗೈ, ಶಿವಕುಮಾರ ಪಾಟೀಲ, ಓಂಕಾರ ತುಂಬಾ, ಮಹೇಶ ಅಂಗಡಿ, ಉಮೇಶ ಜಂಬಗಿ, ಶಾಂತಪ್ಪ ಪ್ರಸಾರ್ಗಿ, ಮಲ್ಲಿಕಾರ್ಜುನ ಮುಗನೂರ ಇದ್ದರು.