ಅಕ್ರಮವಾಗಿ ಪಡಿತರ ಅಕ್ಕಿ ಸಾಗಾಣಿಕೆ ಮಾಡುತ್ತಿದ್ದ ವಾಹನವನ್ನು ಚನ್ನಪಟ್ಟಣ ಗ್ರಾಮಾಂತರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬೆಂಗಳೂರು- ಮೈಸೂರು ಹೆದ್ದಾರಿಯ ಬೈರಾಪಟ್ಟಣ ಬಳಿ ಪೊಲೀಸರು ಹಾಗೂ ಆಹಾರ ಇಲಾಖೆ ಅಧಿಕಾರಿಗಳು ಜಂಟಿಯಾಗಿ ದಾಳಿ ಮಾಡಿ ಬೆಂಗಳೂರಿನಿಂದ ಮಂಡ್ಯ ಕ್ಕೆ ಹೋಗುತ್ತಿದ್ದ ಟೆಂಪೋವನ್ನ ತಡೆದು ತಪಾಸಣೆ ಮಾಡಲಾಗಿ ಅಕ್ಕಿ ಚೀಲಗಳು ಇದ್ದು ಇದನ್ನ ಚಾಲಕನ ಬಳಿ ಪ್ರಶ್ನೆ ಮಾಡಿದಾಗ ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿರುವುದು ಗೊತ್ತಾಗಿದೆ. ಒಟ್ಟು 7803 ಕೆ.ಜಿ ಅಕ್ಕಿ ಇದ್ದು ಇದರ ಮೌಲ್ಯ 1.71.000 ಆಗಿರುತ್ತದೆ. ಈ ಸಂಬಂಧ ಗುರುವಾರ ಚನ್ನಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.