ಕೆಲವರು ದುರುದ್ದೇಶ ಪೂರ್ವಕವಾಗಿ ವಸತಿ ಶಾಲೆಗಳು ಹಾಗೂ ನಮ್ಮ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ಅಂತಹ ಸುಳ್ಳು ಆರೋಪ ಮಾಡುತ್ತಿರುವವರು ಕ್ರಿಮಿನಲ್ ಹಿನ್ನೆಲೆ ಉಳ್ಳವರು ಆಗಿದ್ದಾರೆ. ರೌಡಿ ಶೀಟರ್ ಆಗಿದ್ದವರು ಅಂಚೆ ಇಲಾಖೆಯ ಹಣ ದುರುಪಯೋಗ ಪಡಿಸಿಕೊಂಡು ಇಲಾಖೆಯಿಂದ ವಜಾ ಆಗಿರುವವರು ಇಂತಹ ಕೆಲಸಗಳನ್ನು ಮಾಡುತ್ತಿದ್ದಾರೆ ಅವೆಲ್ಲವೂ ಕೂಡ ಮಾಹಿತಿ ಹಕ್ಕಿನ ಅಡಿಯಲ್ಲಿ ದಾಖಲೆಗಳನ್ನು ಪಡೆದುಕೊಂಡಿದ್ದೇವೆ ಅಂತವರ ವಿರುದ್ಧ ಸೂಕ್ತ ಕ್ರಮ ಆಗಬೇಕು ಎಂದು ಭೀಮ್ ಆರ್ಮಿಯ ಹೊನ್ನೇಶ್ ಒತ್ತಾಯಿಸಿದ್ದಾರೆ.