ತಮ್ಮ ಜಮೀನಿಗೆ ಹೋಗುತ್ತಿದ್ದ ವೇಳೆ ಬಾಜು ಜಮೀನದಾರರು ಇಬ್ಬರ ಮೇಲೆ ಹಲ್ಲೆ ನಡೆಸಿರುವ ಘಟನೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕೋಟಗಲ್ ಗ್ರಾಮದಲ್ಲಿ ನಡೆದಿದೆ.ಹಲ್ಲೆಗೊಳಗಾದ ವ್ಯಕ್ತಿಗಳನ್ನು ಪರ್ವೀನ್ ತಾಜ್(46ವರ್ಷ),ಮುನವರ್ ಸಾಬ್(50ವರ್ಷ)ಎಂದು ಗುರುತಿಸಲಾಗಿದೆ.ಚಿಂತಾಮಣಿ ತಾಲ್ಲೂಕಿನ ಅಂಬಾಜಿದುರ್ಗ ಹೋಬಳಿಯ ಕೋಟಗಲ್ ಗ್ರಾಮದ ಪರ್ವೀನ್ ತಾಜ್ ತಮ್ಮ ಕುಟುಂಬಸ್ಥರ ಜಮೀನಿಗೆ ಉಳಿಮೆ ಮಾಡಲು ಹೋಗುತ್ತಿದ್ದ ವೇಳೆ ಬಾಜು ಜಮೀನು ದಾರರಾದ ಹಸನ್ ಸಾಬ್ ಹಾಗೂ ಆತನ ಮಗ ಹೆಂಡತಿ ಮೂವರು ಗುಂಪು ಕಟ್ಟಿಕೊಂಡು ಬಂದು ಪರ್ವೀನ್ ತಾಜ್ ಹಾಗೂ ಆತನ ಗಂಡ ಮುನವರ್ ಸಾಬ್ ಮೇಲೆ ಹಲ್ಲೆ ನಡೆಸಿದ್ದಾರೆ.ಹಲ್ಲೆಗೊಳಗಾದವರು ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆತಯುತ್ತಿದ್ದಾರೆ.