ಮೇಲೆ ನೂರು ಕೇಸ್ ಹಾಕಿದರೂ ನಾನು ಜಗ್ಗಲ್ಲ ಬಗ್ಗಲ್ಲ. ತಾಕತ್ತಿದ್ದರೆ ನನ್ನ ಬಂಧಿಸಿ ಎಂದು ಮಾಜಿ ಸಚಿವ ರೇಣುಕಾಚಾರ್ಯ ಸವಾಲು ಹಾಕಿದ್ದಾರೆ. ದಾವಣಗೆರೆ ಜಿಲ್ಲೆಯ ಹೊನ್ನಾಳಿಯಲ್ಲಿ ಶನಿವಾರ ಸಂಜೆ 5 ಗಂಟೆಗೆ ಮಾತನಾಡಿದ ಅವರು ಪೊಲೀಸರಿಗೆ ಜಿಲ್ಲಾಡಳಿತ ಗಣಪತಿ ಹಬ್ಬಕ್ಕೆ ಡಿಜೆ ಬಳಕೆ ನಿಷೇಧ ಮಾಡಿತ್ತು. ಇದರ ವಿರುದ್ಧ ರೇಣುಕಾಚಾರ್ಯ ಕಳೆದ ಆ.23ರಂದು ನಗರದ ಜಯದೇವ ವೃತ್ತದಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ್ದಾರೆಂದು ಆ.29 ರಂದು ಪೊಲೀಸರು ಸುಮೋಟೋ ಕೇಸ್ ದಾಖಲಿಸಿ ಅವರ ಮೇಲೆ ಎಫ್‌ಐಆರ್ ಹಾಕಿದ್ದರು. ಈ ಬಗ್ಗೆ ಶನಿವಾರ ಹೊನ್ನಾಳಿಯಲ್ಲಿ ರೇಣುಕಾಚಾರ್ಯ ಪ್ರತಿಕ್ರಿಯಿಸಿ ಪೊಲೀಸರ ವಿರುದ್ಧ ಹರಿಹಾಯ್ದರು.