ಹಿಂದೂಗಳ ಪವಿತ್ರ ಹಬ್ಬವಾಗಿರುವ ಮಂಗಳ ಗೌರಿ ವೃತವನ್ನ ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಜಾಣಿಗೆ ಗ್ರಾಮದಲ್ಲಿ ಗ್ರಾಮದ ಮುತ್ತೈದೆಯರೆಲ್ಲ ಒಟ್ಟಾಗಿ ಸೇರಿ ಹರಿಯುವ ಹೊಳೆಯಲ್ಲಿ ಪೂಜೆ ಮಾಡಿ, ಹೊಳೆ ದಂಡೆಯಿಂದ ಗೌರಿಯನ್ನು ತಮ್ಮ ತಮ್ಮ ಮನೆಗಳಿಗೆ ವಿಶೇಷವಾಗಿ ಬರಮಾಡಿಕೊಂಡರು.