ಹನೂರು ತಾಲೂಕಿನ ಮಲೆಮಹದೇಶ್ವರ ವನ್ಯಧಾಮ ವ್ಯಾಪ್ತಿಯ ಗೋಪಿನಾಥಂ ಸಫಾರಿಯಲ್ಲಿ ವನ್ಯಜೀವಿಗಳ ಓಡಾಟ ಮತ್ತೊಮ್ಮೆ ದೃಷ್ಟಿಗೊಳಿಸಿದ್ದು, ಈ ಬಾರಿ ಸಫಾರಿ ವಾಹನವನ್ನೇ ನೋಡಿ ಹಿಂದಕ್ಕೆ ಹೆಜ್ಜೆ ಹಾಕಿದ ಕರಡಿಯ ದೃಶ್ಯ ವನ್ಯಜೀವಿ ಪ್ರೇಮಿಗಳಲ್ಲಿ ಕುತೂಹಲಕ್ಕೆ ಕಾರಣವಾಗಿದೆ. ಸಫಾರಿ ವಾಹನದ ಮುಂಭಾಗದವರೆಗೂ ಬಂದಿದ್ದ ಕರಡಿಯೊಂದು ವಾಹನವನ್ನು ಗಮನಿಸಿ ಹಠಾತ್ ನಿಲ್ಲುವುದಿ ಅಲ್ಲದೆ,ಕೊಂಚ ಹೆದರಿಕೆಯ ನೋಟದಲ್ಲಿ ಹಿಂದಕ್ಕೆ ಸರಿದ ದೃಶ್ಯ ಸಫಾರಿ ಸಂದರ್ಭದಲ್ಲಿ ಕ್ಯಾಮೆರಾದಲ್ಲಿ ಸೆರೆಯಾಗಿ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಸಫಾರಿಯ ವೇಳೆ ಆನೆ ಹಾಗೂ ಇತರ ಪ್ರಾಣಿಗಳೂ ಪ್ರವಾಸಿಗರಿಗೆ ಮತ್ತು ಪ್ರವಾಸಿಗರಿಗೆ ಗೋಚರವಾಗಿದೆ