ದಾಂಡೇಲಿ : ನಗರದ ಜೆ.ಎನ್.ರಸ್ತೆ ದುರಸ್ತಿಗೆ ಆಗ್ರಹಿಸಿ ಆಟೋ ಚಾಲಕರಿಂದ ಮತ್ತು ಅಟಲ್ ಅಭಿಮಾನಿ ಸಂಘಟನೆಯಿಂದ ಲಿಂಕ್ ರಸ್ತೆಯಿಂದ ನಗರಸಭೆಯವರಿಗೆ ಮೆರವಣಿಗೆಯನ್ನು ಇಂದು ಶುಕ್ರವಾರ ಮಧ್ಯಾಹ್ನ 12:30 ಗಂಟೆ ಸುಮಾರಿಗೆ ಹಮ್ಮಿಕೊಳ್ಳಲಾಯಿತು. ನಗರದ ಪ್ರಮುಖ ರಸ್ತೆಯಾಗಿರುವ ಜೆ.ಎನ್ ರಸ್ತೆ ತೀವ್ರ ಹದಗೆಟ್ಟಿದೆ. ರಸ್ತೆ ಕಾಮಗಾರಿ ಆರಂಭವಾಗುವವರೆಗೆ ತಾತ್ಕಾಲಿಕ ದುರಸ್ತಿಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ಧೂಳನ್ನು ನಿಯಂತ್ರಿಸುವ ನಿಟ್ಟಿನಲ್ಲಿಯೂ ಅಗತ್ಯ ಕ್ರಮವನ್ನು ಕೈಗೊಳ್ಳಬೇಕೆಂದು ಆಗ್ರಹಿಸಿ ಬರೆದ ಮನವಿಯನ್ನು ಪೌರಾಯುಕ್ತರಾದ ವಿವೇಕ ಬನ್ನೆ ಅವರಿಗೆ ನೀಡಲಾಯಿತು.