ಮಳವಳ್ಳಿ : ತಾಲ್ಲೂಕಿನ ಕಗ್ಗಲಿಪುರ ಗ್ರಾಮದ ಕಬ್ಬಿನ ಗದ್ದೆಯಲ್ಲಿ 1ತಿಂಗಳ ಹಿಂದಷ್ಟೇ ಜನಿಸಿರುವ ಎರಡು ಮುದ್ದಾದ ಪುಟ್ಟಾಣಿ ಚಿರತೆ ಮರಿಗಳು ಪತ್ತೆಯಾಗಿವೆ. ಸೋಮವಾರ ಸಾಯಂಕಾಲ 4.30ರ ಸಮಯದಲ್ಲಿ ಕಗ್ಗಲಿಪುರ ಗ್ರಾಮದ ಕೆ.ಎಸ್.ವೃಷಭೇಂದ್ರ ಅವರ ಕಬ್ಬಿನ ಗದ್ದೆಯಲ್ಲಿ ಈ ಚಿರತೆ ಮರಿಗಳು ಕಾಣಿಸಿಕೊಂಡಿವೆ. ವೃಷಬೇಂದ್ರ ಅವರಿಗೆ ಸೇರಿದ ಕಬ್ಬಿನ ಗದ್ದೆಯಲ್ಲಿ ಕಬ್ಬು ಕಟಾವು ಮಾಡುವಾಗ ಚಿರತೆ ಮರಿಗಳು ಪತ್ತೆಯಾಗಿದ್ದು ತಕ್ಷಣ ವೃಷಭೇಂದ್ರ ಅವರು ಅರಣ್ಯಾಧಿಕಾರಿಗಳಾದ ಶ್ರೀಧರ್ ರವರಿಗೆ ಮಾಹಿತಿ ನೀಡಿದ್ದು ಸ್ಥಳಕ್ಕೆ ಬಂದ ಅಧಿಕಾರಿಗಳಿಗೆ ಪುಟ್ಟ ಚಿರತೆ ಮರಿಗಳನ್ನು ಒಂದು ರಟ್ಟಿನ ಬಾಕ್ಸಿನಲ್ಲಿ ಸಂರಕ್ಷಣೆ ಮಾಡಿ ಅವರು ವಶಕ್ಕೆ ನೀಡಿದ್ದಾರೆ.