ಜಿಲ್ಲೆಯ ಖ್ಯಾತ ಶಿಕ್ಷಣ ತಜ್ಞ ಎಚ್.ನರಸಿಂಹಯ್ಯ ಅವರು “ಪ್ರಶ್ನಿಸದೆ ಏನನ್ನು ಒಪ್ಪಬೇಡಿ” ಎಂದು ಕರೆ ನೀಡಿದ್ದರು. ಪ್ರಶ್ನಿಸಿದರೆ ಸರಿ ಯಾವುದು ತಪ್ಪು ಯಾವುದು ಎಂದು ತಿಳಿಯುತ್ತದೆ ಶಿಕ್ಷಣ ಪಡೆದವರೇ ಪ್ರಶ್ನಿಸುವ, ಚರ್ಚಿಸುವ ಮನುಭಾವವನ್ನು ಹೆಚ್ಚಾಗಿ ಹೊಂದಿರುತ್ತಾರೆ. ಕಿವಿಗೆ ಕೇಳಿಸುವ ಸಂವಹನವನ್ನು ಕೇಳಿ ಅರಿಯಬಹುದು ಆದರೆ ಬರವಣಿಗೆಯಲ್ಲಿರುವುದನ್ನು ತಿಳಿಯಬೇಕಾದರೆ ನಮಗೆ ಅಕ್ಷರದ ಜ್ಞಾನ ಬೇಕೇ ಬೇಕು. ಆದ್ದರಿಂದ ಜಿಲ್ಲೆಯ್ಲಲಿನ ಸಾಕ್ಷರತೆ ಪ್ರಮಾಣವನ್ನು ಉತ್ತಮ ಪಡಿಸಬೇಕು ಎನ್ನುವ ಹಿನ್ನೆಲೆಯಲ್ಲಿ 15 ವರ್ಷ ಮೇಲ್ಪಟ್ಟ ಎಲ್ಲ ವಯೋಮಾನದ ಜಿಲ್ಲೆಯ ಅನಕ್ಷರಸ್ಥರಿಗೆ ಮೂಲ ಶಿಕ್ಷಣ ದೊರೆಯುವಂತಹ ವಾತಾವರಣ ಸೃಷ್ಟಿಸಬೇಕು. ಆ ನಿಟ್ಟಿನಲ್ಲಿ ಜಿಲ್ಲಾಡಳಿತ 2024-25 ನೇ ಸಾಲಿನಲ್ಲಿ 5,790 ಅನಕ್ಷರಸ್ಥರನ್ನು ನವ ಸಾಕ್ಷರ