ಬಿ ಆರ್ ಟಿ ಎಸ್ ಚಿಗರಿ ಬಸ್ ಯುವಕನಿಗೆ ಡಿಕ್ಕಿ ಹೊಡೆದ ಘಟನೆ ಧಾರವಾಡದ ವನಶ್ರೀ ನಗರ ಕ್ರಾಸ್ ಬಳಿ ನಡೆದಿದ್ದು, ಸ್ಥಳೀಯರು ಶುಕ್ರವಾರ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಟ್ಟಿಗಟ್ಟಿ ಗ್ರಾಮದ ಶ್ರೀಕಾಂತ ಎಂಬುವರಿಗೆ ತಲೆ ಹಾಗೂ ಕಾಲಿಗೆ ತೀವ್ರವಾದ ಗಾಯವಾಗಿದ್ದು, ಅವರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನೂ ಸ್ಥಳೀಯರು ದಿಢೀರ್ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.