ಸ್ಥಳೀಯ ಶಾಸಕ ಪ್ರಕಾಶ ಕೋಳಿವಾಡ ಆಪ್ತ ಸಹಾಯಕ ಶ್ರೀನಿವಾಸ ಹಳ್ಳಳ್ಳಿ ಅವರ ಕಂಠಿಬಿರೇಶ್ವರ ನಗರದ ಮನೆಗೆ ನುಗ್ಗಿದ ಕಳ್ಳರು ಮನೆಯಲ್ಲಿದ್ದ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಹಾಗೂ ನಗದು ದೋಚಿ ಪರಾರಿಯಾಗಿದ್ದಾರೆ. ಶ್ರೀನಿವಾಸ ಹಳ್ಳಳ್ಳಿ ಕುಟುಂಬ ಮನೆಯಲ್ಲಿ ಇಲ್ಲದ ಸಮಯವನ್ನು ಹೊಂಚು ಹಾಕಿದ ಕಳ್ಳರು ಮನೆಯ ಬಾಗಿಲು ಮುರಿದು ಮನೆಯಲ್ಲಿದ್ದ ಮಾಂಗಲ್ಯ ಚೈನ್, ಬಂಗಾರದ ಮುತ್ತಿನ ಸರ, ಬಂಗಾರದ ನಾಣ್ಯ, ಬಂಗಾರದ ಕಿವಿ ಜುಮಕಿ, ಬಂಗಾರದ ಸಾದಾಚೈನ್, ಬಂಗಾರದ ಬೆರಳು ಉಂಗುರ ಕದ್ದಿದ್ದಾರೆ.