ಕೇಂದ್ರದ ಜಿಎಸ್ ಟಿ ಇಳಿಕೆ ವಿಚಾರಕ್ಕೆ ಸಂಬಂಧಿಸಿ ಗುರುವಾರ ಸಂಜೆ 5 ಗಂಟೆ ಸುಮಾರಿಗೆ ವಿಧಾನಸೌಧದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ ಅವರು, ನಾವು ಗಬ್ಬರ್ ಸಿಂಗ್ ಟ್ಯಾಕ್ಸ್ ಅಂತ ಹೇಳಿದ್ದೆವು. ಸರಳೀ ಕರಣ ಮಾಡ್ತೇವೆ ಅಂತ ಬಂದಿದ್ದಾರೆ. ಎಷ್ಟರ ಮಟ್ಟಿಗೆ ಆರ್ಥಿಕ ಸುಧಾರಣೆ ಮಾಡ್ತಾರೆ. ಪೆನ್ಸಿಲ್ ಮೇಲೆ,ಚಪಾತಿ,ಮೊಸರಿನ ಮೇಲೆ ಟ್ಯಾಕ್ಸ್ ಹಾಕಿದ್ರು, ಈಗ ಜ್ಙಾನೋದಯ ಆಗಿದೆಯಲ್ಲ. ಶ್ರೀಮಂತರನ್ನ ಬಿಟ್ಟಿದ್ದಾರೆ. ಬಡವರು, ಸಾಮಾನ್ಯರ ಮೇಲೆ ಇನ್ನೂ ಲೋಪವಿದೆ. ಅದೆಲ್ಲವೂ ಸರಿಯಾಗಬೇಕು. ರಾಜ್ಯಗಳಿಗೆ ಅನ್ಯಾಯವಾಗ್ತಿದೆ, ಅದನ್ನ ಹೇಗೆ ಸರಿಮಾಡ್ತಾರೆ ನೊಡೋಣ ಎಂದರು.