ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ರಾಯಚೂರ ಜಿಲ್ಲೆಯ ಸಿಂಧನೂರದ ರೈತ ನಾಗರಾಜ ಹುಡಾ ಎನ್ನುವವರು ತಮ್ಮ ಐದು ಎಕರೆ ಜಮೀನಿನಲ್ಲಿ ಬೆಳೆದಿದ್ದ ದಾಳಿಂಬೆ ಬೆಳೆ ಸಂಪೂರ್ಣವಾಗಿ ನಾಶವಾಗಿದೆ. ಇದರ ಕುರಿತು ಭಾನುವಾರ ಮಧ್ಯಾನ ರೈತ ನಾಗರಾಜ ತಮ್ಮ ಅಳಲು ತೋಡಿಕೊಂಡು, 5 ಎಕರೆಯಲ್ಲಿ ಬೆಳೆದಿದ್ದ ದಾಳಿಂಬೆ ಬೆಳೆ ಮಳೆಯಿಂದಾಗಿ ಎಲ್ಲಾ ಹಣ್ಣುಗಳು ನೆಲಕ್ಕೆ ಉದುರಿ ಹೋಗಿವೆ. ಬತ್ತದ ಬದಲಿಗೆ ಪರ್ಯಾಯ ಬೆಳೆಯಲು ಹೋಗಿದ್ದರಿಂದ ಎಂತಹ ದುಸ್ಥಿತಿ ಬಂದಿದೆ ಎಂದು ಸರ್ಕಾರ ಕೂಡಲೇ ಸಮೀಕ್ಷೆ ಮಾಡಿ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ..