ಕಾರಟಗಿ ತಾಲೂಕಿನ ಬೂದಗುಂಪ ಗ್ರಾಮ ಪಂಚಾಯತ್ ಅಧಿಕಾರಿಗಳು ಮಾಡಿರುವ ಎಡವಟ್ಟಿನಿಂದ ಬಡ ಕುಟುಂಬ ಒಂದು ಬೀದಿಗೆ ಬಿದ್ದಿರುವ ಘಟನೆ ಬೆಳಕಿಗೆ ಬಂದಿದೆ . ಬೂದಗುಂಪ ಗ್ರಾಮದ ನೀಲವ್ವ ಎಂಬ ಮಹಿಳೆಯ ಮನೆಯನ್ನ ಗ್ರಾಮ ಪಂಚಾಯತ್ ಅಧಿಕಾರಿಗಳು ಯಾವುದೇ ಮುನ್ಸೂಚನೆಯನ್ನು ಹಾಗೂ ನೋಟಿಸ್ ಅನ್ನ ನೀಡದೆ ಏಕಾಏಕಿ ಮನೆಯನ್ನ ತೆರವುಗೊಳಿಸಿರುವ ಕಾರಣ ಬಡ ಕುಟುಂಬ ಒಂದು ಬೀದಿಗೆ ಬಿದ್ದಿದ್ದು ಗ್ರಾಮ ಪಂಚಾಯತ್ ಕಚೇರಿಯ ಎದುರು ವಾಸ್ತವ ಹೂಡಲು ಬಡ ಕುಟುಂಬ ಮುಂದಾಗಿದೆ ಗ್ರಾಮದ ನೀಲಮ್ಮ ತನ್ನ ಎರಡು ಹೆಣ್ಣು ಮಕ್ಕಳನ್ನು ಕಟ್ಟಿಕೊಂಡು ಗ್ರಾಮ ಪಂಚಾಯತ್ ಕಚೇರಿ ಎದುರು ಮುಕ್ಕಾಂ ಹೂಡಿದ್ದಾರೆ