ಒಳ ಮೀಸಲಾತಿ ಜಾರಿಯಿಂದಾಗಿ ಮಾದಿಗ ಸಮುದಾಯಕ್ಕೆ ನ್ಯಾಯ ಸಿಕ್ಕಂತಾಗಿದೆ. ಶತಮಾನಗಳಿಂದ ತುಳಿತಕ್ಕೆ ಒಳಗಾಗಿದ್ದ ಸಮುದಾಯ ಮೇಲೆ ಏಳಲು ಒಳ ಮೀಸಲಾತಿ ಆಸರೆಯಾಗಿದೆ. ಜೊತೆಗೆ ದಲಿತ ಪರ ಸಂಘಟನೆಗಳ 35 ವರ್ಷಗಳ ನಿರಂತರ ಹೋರಾಟಕ್ಕೆ ಜಯ ಸಿಕ್ಕಿದೆ ಅಂತ ಡಿ ಎಸ್ ಎಸ್ ರಾಜ್ಯ ಸಂಘಟನಾ ಸಂಚಾಲಕ ಎಸ್. ಎನ್ ಬಳ್ಳಾರಿ ಹೇಳಿದರು.