ಪೌರಾಯುಕ್ತ ಸೇವೆಯಿಂದ ಬಿಡುಗಡೆಯಾಗಿರುವ ರಾಮದಾಸ್ ಅವರನ್ನು ಮುಂದುವರಿಸಬಾರದೆಂದು ಒತ್ತಾಯಿಸಿ ವಿವಿದ ಕನ್ನಡ ಪರ ಸಂಘಟನೆ ಗಳ ಮುಖಂಡರು ಚಾಮರಾಜನಗರದ ನಗರಸಭೆ ಕಚೇರಿಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು. ಕರ್ನಾಟಕ ಕನ್ನಡ ರಕ್ಷಣಾ ವೇದಿಕೆ ಅಧ್ಯಕ್ಷ ಚಾ.ಗು.ನಾಗರಾಜ್ ಮಾತನಾಡಿ, ಚಾಮರಾಜನಗರ ನಗರಸಭೆಯಲ್ಲಿ 2 ವರ್ಷಕ್ಕೂ ಹೆಚ್ಚು ಕಾಲ ಪೌರಾಯುಕ್ತರಾಗಿ ಆಡಳಿತ ನಡೆಸಿರುವ ರಾಮದಾಸ್ ಅವರನ್ನು ಜಿಲ್ಲಾಧಿಕಾರಿಗಳು ಮಾತ್ಮ ಇಲಾಖೆಗೆ ಬಿಡುಗಡೆ ಮಾಡಿದರು. ಆದರೆ ಪೌರಾಯುಕ್ತ ರು ನ್ಯಾಯಾಲಯಕ್ಕೆ ಸುಳ್ಳು ಮಾಹಿತಿ ನೀಡಿ ತಡೆಯಾಜ್ಞೆ ತಂದಿದ್ದಾರೆ. ಇದು ನಗರ ನಾಗರಿಕರಿಗೆ ಮಾಡಿದ ಅಪಮಾನವಾಗಿದೆ ಎಂದರು