ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲ್ಲೂಕಿನ ಗೋವಿನಕೋವಿ ಗ್ರಾಮದಲ್ಲಿ ಒಂಟಿ ಮಹಿಳೆಯ ಮನೆಗೆ ನುಗ್ಗಿ ಬಂಗಾರದ ಸರ ದೋಚಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ನ್ಯಾಮತಿ ತಾಲ್ಲೂಕಿನ ದೊಡ್ಡೇರಿ ಗ್ರಾಮದ ಪರಶುರಾಮ ಬಂಧಿರ ಆರೋಪಿ. ಆರೋಪಿ ಗೋವಿನಕೋವಿ ಗ್ರಾಮದ ಹಾಲಮ್ಮ ಎಂಬುವವರ ಮನೆಗೆ ನುಗ್ಗಿ 30 ಗ್ರಾಂ ಬಂಗಾರದ ಸರವನ್ನು ದೋಚಿದ್ದ. ಹಾಲಮ್ಮನ ಮಗಳ ಗಂಡ ಯೋಗಿಶಪ್ಪನ ಸ್ನೇಹಿತನಾದ ಆರೋಪಿ ಪರಶುರಾಮ ಯೋಗೀಶಪ್ಪನ ಜೊತೆಗೆ ಒಂದು ದಿನ ಹಾಲಮ್ಮನ ಮನೆಗೆ ಹೋದಾಗ, ಹಾಲಮ್ಮನ ಒಂಟಿಯಾಗಿರುವುದನ್ನು ನೋಡಿ ಹೊಂಚು ಹಾಕಿ ಕೃತ್ಯ ಎಸೆಗಿರುವುದು ತನಿಖೆಯಲ್ಲಿ ತಿಳಿದು ಬಂದಿದೆ ಎಂದು ದಾವಣಗೆರೆ ನಗರದಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಪ್ರಕಟಣೆ ಮೂಲಕ ಶುಕ್ರವಾರ ತಿಳಿಸಿದೆ.