2 ತಿಂಗಳ ಗರ್ಭಿಣಿ ಮಹಿಳೆ ಮೇಲೆ ಇಲ್ಲೊಬ್ಬ ವ್ಯಕ್ತಿ ಹಲ್ಲೆ ಹಾಗೂ ಅತ್ಯಾಚಾರ ಯತ್ನ ವೆಸಗಿದ್ದ ವ್ಯಕ್ತಿಯ ವಿರುದ್ಧ ರಾಯಲ್ಪಾಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಯ ಬಂದನಕ್ಕೆ ನೊಂದ ಮಹಿಳೆ ಗುರುವಾರ ಒತ್ತಾಯಿಸಿದ್ದಾರೆ.ಶ್ರೀನಿವಾಸಪುರ ತಾಲ್ಲೂಕು ರಾಯಲ್ಪಾಡು ಪೊಲೀಸ್ ಠಾಣಾ ವ್ಯಾಪ್ತಿಯ ಬೋರೆಡ್ಡಿಪಲ್ಲಿ ಗ್ರಾಮಕ್ಕೆ ಸೇರಿದ ಪ್ರಭಾಕರರೆಡ್ಡಿ ಎಂಬ ಆಸಾಮಿ ಇದೆ ಗ್ರಾಮದ ರುಶಿಕ ಎಂಬ ಎರಡು ತಿಂಗಳ ಗರ್ಭಿಣಿ ಗ್ರಾಮದ ಕೆರೆ ಅಂಗಳದಲ್ಲಿ ಹಸು ಮೇಯಿಸುವ ವೇಳೆ ಏಕಾಏಕಿ ಹಲ್ಲೆ ಮಾಡಿದ್ದಾನೆ. ಅಲ್ಲದೆ ಅದು ತನ್ನ ಸ್ವಂತ ಜಮೀನು ಇಲ್ಲಿ ಹಸು ಮೇಯಿಸುವುದು ಅಪರಾಧ ಎಂಬಂತೆ ಮಾತನಾಡಿ ಅವಾಚ್ಯ ಶಬ್ದಗಳಿಂದ ನಿಂಧಿಸಿ ಬಲವಂತವಾಗಿ ಅತ್ಯಾಚಾರ ಮಾಡಲು ಯತ್ನಿಸಿದ್ದಾನೆ.