ಆಹಾರ ಅರಸಿ ನಾಡಿನತ್ತ ಬಂದು ಧಾಂಧಲೆ ಮಾಡಿದ್ದ ಕಾಡಾನೆಯನ್ನು ಬಿಆರ್ ಟಿ ಚಾಮರಾಜನಗರ ಬಫರ್ ಸಿಬ್ಬಂದಿ ಹರಸಾಹಸಪಟ್ಟು ಕಾಡಾನೆಯನ್ನು ಮತ್ತೇ ಕಾಡಿಗೆ ಅಟ್ಟಿದ ಪ್ರಸಂಗ ಶುಕ್ರವಾರ ನಡೆಯಿತು. ಚಾಮರಾಜನಗರ ತಾಲೂಕಿನ ಬಿಸಲವಾಡಿ ಗ್ರಾಮದ ಬಳಿ ಬಂದಿದ್ದ ಕಾಡಾನೆ ಬಾಳೆ ಸೇರಿ ಸೋಲಾರ್ ಉಪಕರಣಗಳನ್ನು ನಾಶ ಮಾಡಿತ್ತು. ಇಂದು ಬೆಳಗ್ಗೆಯಿಂದಲೇ ಸೈರನ್ ಹಾಗೂ ಇತರೆ ಪರಿಕರಗಳನ್ನು ಬಳಸಿಕೊಂಡ ಅರಣ್ಯ ಇಲಾಖೆ ಸಿಬ್ಬಂದಿಯು ಹರಸಾಹಸಪಟ್ಟು ಕಾಡಾನೆಯನ್ನು ಮತ್ತೇ ಅರಣ್ಯ ಪ್ರದೇಶಕ್ಕೆ ಅಟ್ಟಿದ್ದರು. ಬಿಸಲವಾಡಿ ಗುಡ್ಡದಿಂದ ಕಾಡಾನೆಯನ್ನು ಅರಣ್ಯಕ್ಕೆ ಓಡಿಸಲಾಗಿದೆ.