ಚಿಂತಾಮಣಿ ನಗರದ ತಾಲೂಕು ಪಂಚಾಯತ್ ಕಚೇರಿ ಬಳಿ ಇದ್ದ ರೆಡ್ಡಿ ಮಿಲ್ಟ್ರಿ ಹೋಟೆಲ್ ಕಟ್ಟಡವನ್ನು ತಾಲೂಕು ಪಂಚಾಯತ್ ಇಓ ಆನಂದ್ ನೇತೃತ್ವದಲ್ಲಿ ತೆರವುಗೊಳಿಸಿದ್ದು ಈ ಕಟ್ಟಡದ ಜಾಗ ತಾಲೂಕು ಪಂಚಾಯತ್ ಕಚೇರಿಗೆ ಸೇರಿದ್ದು ಈ ಹಿನ್ನೆಲೆಯಲ್ಲಿ ಕಟ್ಟಡದ ಅಕ್ರಮ ಒತ್ತುವರಿ ಜಾಗವನ್ನು ಜೆಸಿಬಿ ಯಂತ್ರದ ಮೂಲಕ ತೆರವುಗೊಳಿಸಲಾಯಿತು. ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಕಚೇರಿ ವ್ಯವಸ್ಥಾಪಕ ರವಿ ಸೇರಿದಂತೆ ಹಲವು ಸಿಬ್ಬಂದಿ ಉಪಸ್ಥಿತರಿದ್ದರು