ಯಾದಗಿರಿ ಜಿಲ್ಲೆಯ ವಡಿಗೇರ ತಾಲೂಕಿನ ಗೋನಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮದಲ್ಲಿ ದಲಿತ ಸಮುದಾಯದ ಜನರು ಅನೇಕ ವರ್ಷಗಳ ಹಿಂದಿನಿಂದ ಉಪಯೋಗಿಸಿಕೊಂಡು ಬರುತ್ತಿದ್ದ ಬಾವಿಯನ್ನು ಮುಚ್ಚಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಶನಿವಾರ ಬೆಳಗ್ಗೆ ಗ್ರಾಮದ ಜನರು ಈ ಕುರಿತು ಒತ್ತಾಯಿಸಿ, ಬೇಸಿಗೆ ಸಂದರ್ಭದಲ್ಲಿ ಕುಡಿಯುವ ನೀರಿನ ಸಮಸ್ಯೆ ತುಂಬಾ ಉಂಟಾಗುತ್ತಿದ್ದು ಇಲ್ಲಿಯ ಬಾವಿಯನ್ನೇ ಆಶ್ರಯಿಸಿಕೊಂಡಿದ್ದೇವೆ, ಆದರೆ ಖಾಸಗಿ ವ್ಯಕ್ತಿಗಳು ಇದು ತಮ್ಮ ಜಮೀನಿನಲ್ಲಿರುವ ಬಾವಿ ಎಂದು ಮುಚ್ಚಿದ್ದಾರೆ, ಇದರಿಂದ ನಮಗೆ ನೀರಿನ ತೊಂದರೆ ಉಂಟಾಗಲಿದ್ದು ಬಾವಿಯನ್ನು ತೆಗೆಯಿಸಿ ಕೊಡುವಂತೆ ಸರಕಾರಕ್ಕೆ ಒತ್ತಾಯಿಸಿದ್ದಾರೆ.