ಚಳ್ಳಕೆರೆ:ಮೇಕೆ ಮೇಯಿಸಲು ಗ್ರಾಮದ ಬಳಿಯ ಗುಡ್ಡಕ್ಕೆ ಹೋಗಿದ್ದ ವೇಳೆ ರೈತನ ಎದುರಿಗೆ ಮೇಕೆ ಮೇಲೆ ಚಿರತೆ ಅಟ್ಯಾಕ್ ಮಾಡಿದೆ. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ನನ್ನಿವಾಳ ಗ್ರಾಮದಲ್ಲಿ ಗುರುವಾರ ಮಧ್ಯಾಹ್ನ 1ಗಂಟೆ ಸಮಯದಲ್ಲಿ ಈ ಘಟನೆ ನಡೆದಿದೆ. ಗ್ರಾಮದ ಮೂರ್ತಿ ಎನ್ನುವ ರೈತ ತನ್ನ ಮೇಕೆಗಳನ್ನು ಮೇಯಿಸಲು ಗುಡ್ಡಕ್ಕೆ ಹೋಗಿದ್ದಾಗ ಒಮ್ಮೆಲೇ ಮೇಕೆಗಳ ಮೇಲೆ ಚಿರತೆಯೊಂದು ದಾಳಿ ಮಾಡಿದೆ. ರೈತ ಮೂರ್ತಿ, ತಕ್ಷಣವೇ ಕೂಗಿಕೊಂಡು ಚಿರತೆಯ ಸಮೀಪ ಧೈರ್ಯದಿಂದ ಓಡಿ ಹೋಗಿ ಕಲ್ಲುಗಳನ್ನು ಚಿರತೆಯತ್ತ ಎಸೆದಿದ್ದಾನೆ.