ತಾಲೂಕಿನ ಡೊಂಗರಾಂಪುರ ಗ್ರಾಮದ ನಾಗರಸಿ ಕ್ಯಾಂಪ್ನಲ್ಲಿ ಮನೆ ಮುಂದೆ ಕಟ್ಟಲಾಗಿದ್ದ ಆಕಳು ಕರುವನ್ನು ಚಿರತೆ ಬಲಿ ಪಡೆದಿದೆ ಎನ್ನಲಾಗುತ್ತಿದೆ. ಗ್ರಾಮದ ಪರಮೇಶ್ವರ ಬೆಟ್ಟದ ಕೆಳಗಡೆ ಇರುವ ನಾಗರ್ಸಿ ಕ್ಯಾಂಪ್‌ನಲ್ಲಿ ಬಹುತೇಕರು ಹೊಲದಲ್ಲೇ ಮನೆ ಮಾಡಿಕೊಂಡಿದ್ದಾರೆ. ಮನೆ ಮುಂದೆ ಕಟ್ಟಿದ್ದ ಆಕಳು ಕರುವಿನ ಮೇಲೆ ಚಿರತೆ ದಾಳಿ ನಡೆಸಿ ಆಗಸ್ಟ್ 29 ರ ಶುಕ್ರವಾರ ಬೆಳಗಿನ ಜಾವ ಮೂರು ಗಂಟೆ ಸುಮಾರಿಗೆ ತಿಂದು ಹಾಕಿದೆ ಎಂದು ರೈತ ಮುಖಂಡ ರಂಗನಾಥ ತಿಳಿಸಿದ್ದಾರೆ. ಈಗಾಗಲೇ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು, ಪಶು ವೈದ್ಯ ಸೇವಾ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಕೆಲ ವಾರಗಳ ಹಿಂದಷ್ಟೆ ಚಿರತೆ ಸೆರೆಹಿಡಿಯಲಾಗಿತ್ತು. ಇದೀಗ ಮತ್ತೆ ಗ್ರಾಮಸ್ಥರಿಗೆ ಚಿರತೆ ಭಯ ಶುರುವಾಗಿದೆ.