ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲೂಕಿನ ತಡೆಗ, ಜಾವೂರು, ಅನುವನಹಳ್ಳಿ ಗ್ರಾಮಗಳಲ್ಲಿ ಸಾಕಷ್ಟು ಕಿರುಕುಳ ಕೊಡುತ್ತಿದ್ದ ಚಿರತೆಯನ್ನು ಅರಣ್ಯ ಇಲಾಖೆಯ ಸಿಬ್ಬಂದಿಗಳು ಕಳೆದ ವಾರ ಸೆರೆಹಿಡಿದಿದ್ದರು. ಆದರೆ ಮೂರು ವರ್ಷದ ಹೆಣ್ಣು ಚಿರತೆ ಅರಣ್ಯ ಇಲಾಖೆಯವರು ಸೆರೆಹಿಡಿಯುವುದಕ್ಕೂ ಮುಂಚೆ ಓಡಾಡಿದ್ದ ಸಿಸಿ ಕ್ಯಾಮೆರಾದಲ್ಲಿ ದೃಶ್ಯ ಸರಿಯಾಗಿದೆ. ತಡಗ ಗ್ರಾಮದ ಶಿವಕುಮಾರ್ ಎಂಬುವವರ ಮನೆಗೆ ಚಿರತೆ ನುಗಿದೆ ಮನೆಯ ಕಾಂಪೌಂಡ್ ಒಳಗೆ ಬರುತ್ತಿದ್ದಂತೆ ಚಿರತೆ ಗಾಬರಿಗೊಂಡು ಕಾಂಪೌಂಡ್ ಎಗರಿ ಎಸ್ಕೇಪ್ ಆಗಿದೆ.