Download Now Banner

This browser does not support the video element.

ಕೊಪ್ಪ: ಮಾಜಿ ಸಚಿವ ಗೋವಿಂದೇಗೌಡರ ಮನೆ ಕಳ್ಳತನ..! ಮೂವರು ಅಂತರಾಷ್ಟ್ರೀಯ ಕಳ್ಳರ ಬಂಧನ, ದಂಪತಿ ಎಸ್ಕೇಪ್.!

Koppa, Chikkamagaluru | Aug 23, 2025
ಮಾಜಿ ಸಚಿವ ದಿ. ಗೋವಿಂದೇಗೌಡರ ಮನೆಗಳ್ಳತನ ಪ್ರಕರಣದಲ್ಲಿ ಮೂವರು ನೇಪಾಳಿ ಮೂಲದ ಆರೋಪಿಗಳನ್ನು ಬಂಧಿಸಲಾಗಿದೆ. ಬಂದಿತರಿಂದ ಒಂದೂವರೆ ಕೋಟಿ ಮೌಲ್ಯದ ಚಿನ್ನಾಭರಣ & ಕೃತ್ಯಕ್ಕೆ ಬಳಸಿದ ಎರಡು ಕಾರು ಸೇರಿದಂತೆ ಅಂದಾಜು ಒಟ್ಟು 1,75,00000/- ರೂ ಮೌಲ್ಯದ ಸ್ವತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅ. ರಂದು ಬೆಳಗಿನ ಜಾವ 02.55ರ ಗಂಟೆ ಸುಮಾರಿಗೆ ಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯ ಹರಂದೂರು ಗ್ರಾಮದ ಮಣಿಪುರ ಎಸ್ಟೇಟ್‌ನ ಮಾಲೀಕ ಎಚ್ .ಜಿ. ವೆಂಕಟೇಶ್ ಮನೆಯಲ್ಲಿ 6 ಲಕ್ಷ ನಗದು ಮತ್ತು 37,50,000/- ಮೌಲ್ಯದ ಚಿನ್ನ, ಬೆಳ್ಳಿ ಆಭರಣಗಳನ್ನು ಕಳ್ಳರು ಕಳವು ಮಾಡಿಕೊಂಡು ಹೋಗಿದ್ದರು. ಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
Read More News
T & CPrivacy PolicyContact Us