ಇಟಗಿ ಗ್ರಾಮದ ಬಳಿ ಮುಖ್ಯ ಮಾರ್ಗದ ಪೈಪ್ ಲೈನ್ ದುರಸ್ತಿ ಕಾಮಗಾರಿ ಇರುವುದರಿಂದ ರಾಣೆಬೆನ್ನೂರು ನಗರದ ಜನತೆಗೆ ಎರಡು ದಿನಗಳ ಕಾಲ ನಿರಂತರ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ರಾಣೇಬೆನ್ನೂರು ನಗರಕ್ಕೆ 24/7 ನಿರಂತರ ನೀರು ಸರಬರಾಜು ಮಾಡುವ ಮುಖ್ಯ ಕೊಳವೆ ಮಾರ್ಗದ ಪೈಪ್ ಇಟಗಿ ಗ್ರಾಮದ ಹತ್ತಿರ ಒಡೆದಿದ್ದು, ಮುಖ್ಯ ಕೊಳವೆ ಮಾರ್ಗದ ದುರಸ್ತಿ ಕಾರ್ಯ ಪ್ರಗತಿಯಲ್ಲಿದೆ. ಆದ್ದರಿಂದ ಸೆ.1ರ ಬೆಳಗ್ಗೆಯಿಂದ ಸೆ.2ರ ಸಂಜೆಯ ತನಕ ನಿರತಂತರ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಆದ್ದರಿಂದ ನಗರದ ಜನತೆ ಸಹಕರಿಸಬೇಕೆಂದು ನಗರಸಭೆ ಪೌರಾಯುಕ್ತರು ತಿಳಿಸಿದ್ದಾರೆ