ಸಚಿವ ಬೋಸರಾಜು ಪುತ್ರ ರವಿ ಬೋಸರಾಜು ಯಾವುದೇ ಅಧಿಕಾರದಲ್ಲಿ ಇರದಿದ್ದರೂ ನನ್ನ ಮತ್ತು ನಮ್ಮ ಕುಟುಂಬದ ಮಾನಹರಣ ಮಾಡುತ್ತಿದ್ದಾರೆ ಎಂದು ಬಿಜೆಪಿ ಯುವ ಮುಖಂಡ ಸನ್ನಿ ರೊನಾಲ್ಡ್ ಆರೋಪಿಸಿದರು. ಮಗರದ ಪತ್ರಿಕಾಭವನದಲ್ಲಿ ಸೋಮವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನನ್ನ ಏಳಿಗೆ ಸಹಿಸದೆ ರವಿ ಬೋಸರಾಜು ಇಷ್ಟ ಬಂದ ಆದೇಶ ಮಾಡಿಸುತ್ತಿದ್ದಾರೆ. ಈ ಹಿಂದೆ ಚುನಾವಣೆ ಪ್ರಚಾರವೇಳೆ ನಡೆದ ಗಲಾಟೆ ಹಾಗೂ ಹಾಷ್ಮಿಯಾ ತಡೆಗೋಡೆ ತೆರವು ಕುರಿತು ಅಧಿಕಾರಿಗಳ ವಿರುದ್ಧ ಮಾತನಾಡಿದ್ದು ರವಿ ಬೋಸರಾಜು ಕಣ್ಣು ಕೆಂಪಾಗಿಸಿದೆ. ಮುಂದೆ ಇಂತಹ ಬೆದರಿಕೆಗಳಿಗೆ ಬಗ್ಗಲ್ಲ. ಕಾನೂನಾತ್ಮಕ ಹೋರಾಟ ಮಾಡುತ್ತೇವೆ ಎಂದರು.