ಗೌರಿಬಿದನೂರು: ಈ ವರ್ಷ ಉತ್ತಮ ಮಳೆಯಾಗಿರುವ ಕಾರಣ ತಾಲ್ಲೂಕಿನಾದ್ಯಂತ ಉತ್ತಮ ಬಿತ್ತನೆಯಾಗಿದೆ. ಅಲ್ಲದೆ,ಕಳೆದ ಹಲವು ದಿನಗಳಿಂದ ಮತ್ತೆ ಬಿಡದೆ ಮಳೆ ಸುರಿಯುತ್ತಿರುವ ಕಾರಣ, ಉತ್ತಮ ಫಸಲು ಪಡೆದುಕೊಳ್ಳಬೇಕೆಂಬಕಾರಣಕ್ಕೆ ರೈತರು ಯೂರಿಯಾದ ಮೊರೆ ಹೋಗಿದ್ದಾರೆ. ಆದರೆ, ಕೆಲವು ಕಡೆಗಳಲ್ಲಿ ಹರಳು ಯೂರಿಯಾದ ಅಭಾವಹೆಚ್ಚಿದೆ. ಇದರಿಂದಾಗಿ ರೈತರು ಹರಳು ಯೂರಿಯಾ ಪಡೆಯಲು ಟಿಎಪಿಸಿಎಂಎಸ್ ಅಂಗಡಿಗಳ ಎದುರು ಸಾಲುಗಟ್ಟಿನಿಂತಿರುವ ದೃಶ್ಯಗಳು ಸಾಮಾನ್ಯ ಎಂಬಂತಾಗಿದೆ.