ಉತ್ತರ ಕನ್ನಡ ಜಿಲ್ಲಾ ಹೊಂಯ್ಕೆ(ಮರಳು) ಕಾರ್ಮಿಕರ ಸಂಘವು ಜಿಲ್ಲಾಡಳಿತದ ಮೂಲಕ ಸರಕಾರಕ್ಕೆ ಮನವಿಯನ್ನು ಬುಧವಾರ ಸಲ್ಲಿಸಿದೆ. ಜಿಲ್ಲಾ ಸಿಆರ್ಝಡ್ ವ್ಯಾಪ್ತಿಯ ನದಿ ಪಾತ್ರಗಳಲ್ಲಿ ಸ್ಥಗಿತಗೊಂಡಿರುವ ಸಾಂಪ್ರದಾಯಿಕ ಪದ್ಧತಿಯ ಮರಳುಗಾರಿಕೆಯನ್ನು ತಕ್ಷಣವೇ ಪುನರಾರಂಭಿಸುವಂತೆ ಸಂಘವು ಒತ್ತಾಯಿಸಿದೆ. ಅಪರ ಜಿಲ್ಲಾಧಿಕಾರಿ ಸಾಜೀದ್ ಮುಲ್ಲಾ ಅವರಿಗೆ ಬುಧವಾರ ಸಂಜೆ 4.40ಕ್ಕೆ ಮವನಿಯನ್ನು ಸಲ್ಲಿಸಿದರು. ಮನವಿ ಸಲ್ಲಿಸುವ ವೇಳೆ ಉತ್ತರ ಕನ್ನಡ ಜಿಲ್ಲಾ ಹೊಂಯ್ಕೆ ಕಾರ್ಮಿಕರ ಸಂಘದ ಅಧ್ಯಕ್ಷ ದಿಗಂಬರ್ ಶೇಟ್ ಮತ್ತು ಜಿಲ್ಲಾ ಉಪಾಧ್ಯಕ್ಷ ವಿನೋದ ನಾಯ್ಕ, ಗೋವಿಂದ ನಾಯ್ಕ, ಅರವಿಂದ ಕಲ್ಗುಟ್ಕರ್, ಸದಸ್ಯರು ಇದ್ದರು