ತಾಲೂಕಿನ ಕೂತಂಡಹಳ್ಳಿ ಗ್ರಾಮದ ರೈತ ಮಂಜುನಾಥ್ ಎಂಬುವರ ಚಂಡು ಹೂವು ಮಾರುಕಟ್ಟೆಯಲ್ಲಿ ಮಾರಾಟವಾಗದ ಹಿನ್ನೆಲೆ ಅಮ್ಮೇರಹಳ್ಳಿ ಸಮೀಪ ಮಾಲೂರು ರಸ್ತೆ ಬದಿಯಲ್ಲಿ ಸುರಿದ ಘಟನೆ ಶನಿವಾರ ನಡೆದಿದೆ. ಈ ವೇಳೆ ಮಾತನಾಡಿದ ರೈತ ಗಣೇಶ್ ಮಾರುಕಟ್ಟೆಯಲ್ಲಿ ಹೂವಿಗೆ ಬೆಲೆ ಇಲ್ಲದಾಗಿದೆ. ಹಾಕಿದ ಬಂಡವಾಳವೂ ವಾಪಸ್ಸು ಬಂದಿಲ್ಲ. ಮೈಮೇಲೆ ಸಾಲ ಮಾಡಿಕೊಂಡು ಬೆಳೆದಿದ್ದ ರೈತರು ಇದೀಗ ಮೂಟೆಗೆ 100 ರೂಪಾಯಿಗೆ ಮಾರಾಟವಾಗುತ್ತಿದೆ. ಇದರಿಂದ ಬಂಡವಾಳವೂ ಬರುವುದಿಲ್ಲ. ಹೂ ಕಿತ್ತು ಮಾರುಕಟ್ಟೆಗೆ ತರುವ ಹಣ ಕೂಡ ಬರುತ್ತಿಲ್ಲ ಡಂದು ಆಕ್ರೋಶ ವ್ಯಕ್ತಪಡಿಸಿ ರೈತರು ಹೂಗಳನ್ನು ಕಿತ್ತು, ರಸ್ತೆ ಬದಿಯಲ್ಲಿ ಎಸೆದು ಆಕ್ರೋಶ ವ್ಯಕ್ತಪಡಿಸಿದರು.