ಸರಕಾರಿ ಆದೇಶವನ್ನು ಉಲ್ಲಂಘಿಸಿ ಡಿ.ಜೆ ಹಚ್ಚಿದ ಆರೋಪದಡಿ ಹಾವೇರಿಯ ಸುಭಾಸ್ ಸರ್ಕಲ್‌ನ ಶ್ರೀ ಗಜಾನನ ಉತ್ಸವ ಸಮಿತಿ ಹಾಗೂ ಹುಂಬಿ ಡಿ.ಜೆ ಸೌಂಡ್ ಸಿಸ್ಟಂ ಮಾಲೀಕರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸಾರ್ವಜನಿಕರ ಶಾಂತತೆಗೆ ತೊಂದರೆಯಾಗುವ ಕಾರಣಕ್ಕೆ ಗಣಪತಿ ಪ್ರತಿಷ್ಠಾಪನೆ ಕಾಲಕ್ಕೆ ಹೆಚ್ಚು ಧ್ವನಿ ಹೊರಡಿಸುವ ಡಿಜೆ ಸೌಂಡ್ ಬಾಕ್ಸ್‌ಗಳನ್ನು ಹಚ್ಚಲು ಅನುಮತಿ ನೀಡದೇ ನಿಷೇಧ ಹೇರಿದ್ದರೂ ಕೂಡ ಸರಕಾರಿ ಆದೇಶವನ್ನು ಉಲ್ಲಂಘಿಸಿ ಹಾವೇರಿನಗರದಲ್ಲಿ ಡಿಜೆ ಸೌಂಡ್ ಬಳಸಿ ಮೆರವಣಿಗೆ ಮಾಡಲಾಗಿದೆ ಎಂದು ಆರೋಪಿಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಹಾವೇರಿ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.