ಮನೆಗೆ ಹಾಕಿಸಿಕೊಳ್ಳಲಾಗಿದ್ದ ಟಾಟಾ ಸೈಡಿಶ್ ಗೆ ಆನ್ ಲೈನ್ ನಲ್ಲಿ ರಿಚಾರ್ಜ್ ಮಾಡಲು ಹೋಗಿ ಲಕ್ಷಾಂತರ ರೂಪಾಯಿ ಹಣವನ್ನ ಕಳೆದುಕೊಂಡಿರುವ ಘಟನೆ ನಡೆದಿದೆ. ಬಿಡದಿಯ ಈಗಲ್‌ಟನ್ ರೆಸಾರ್ಟ್ ನಿವಾಸಿ ಬಾಬಾರ್ ಪಾಷ ಅವರಿಗೆ 4 ಲಕ್ಷ ಹಣ ವಂಚನೆಯಾಗಿದೆ. ಬಾಬಾರ್ ಅವರು ತಮ್ಮ ಮನೆಯ ಡಿಶ್ ಗೆ ರಿಚಾರ್ಜ್ ಮಾಡುವ ಸಲುವಾಗಿ ಆನ್ಲೈನ್ ನಲ್ಲಿ ಟಾಟಾ ಪ್ಲೇ ಆಪ್ ಡೌನ್ ಲೋಡ್ ಮಾಡಿಕೊಂಡು ಅದರಲ್ಲಿ ಇದ್ದ ನಂಬರ್ ಗೆ ಕರೆ ಮಾಡಿದ್ದಾರೆ. ಕರೆ ಸ್ವೀಕರಿಸಿದ ವ್ಯಕ್ತಿ ವ್ಯಾಟ್ಸಪ್ ಕರೆ ಮಾಡುವುದಾಗಿ ಹೇಳಿ ಕರೆ ಮಾಡಿದ್ದಾರೆ. ಕರೆಯಲ್ಲಿ ಮಾತನಾಡಿ ಕಟ್ ಆಗುತ್ತಿದಂತೆ 8 ಬಾರಿ ಹಣ ಕಡಿತವಾಗಿದೆ. ಈ ಸಂಭಂಧ ರಾಮನಗರದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಬುಧವಾರ ಪ್ರಕರಣ ದಾಖಲಾಗಿದೆ.