ದಾಂಡೇಲಿ : ನಗರದಲ್ಲಿ ಬಿಡಾಡಿ ದನ ಕರುಗಳ ಉಪಟಳ ಮತ್ತೆ ಏರಿಕೆಯಾಗಿದ್ದು, ವಾಹನಗಳ ಸುಗಮ ಸಂಚಾರಕ್ಕಂತೂ ತೀವ್ರ ಅಡಚಣೆಯಾಗಿದೆ. ಅದು ಇದೀಗ ಅಂಬೇವಾಡಿಯಲ್ಲಂತೂ ರಾಜ್ಯ ಹೆದ್ದಾರಿಯ ಪಕ್ಕದಲ್ಲಿರುವ ಮನೆಗಳ ಒಳಗಡೆ ಬಿಡಾಡಿ ದನ ಕರುಗಳು ಹೊಕ್ಕುತ್ತಿದ್ದು ಇದರಿಂದ ಸ್ಥಳೀಯರಿಗೆ ತೀವ್ರ ತೊಂದರೆಯಾಗಿದೆ. ಇತ್ತೀಚಿನ ಕೆಲ ದಿನಗಳ ಹಿಂದೆ ಬಿಡಾಡಿ ದನ ಕರುಗಳ ನಿಯಂತ್ರಣಕ್ಕೆ ನಗರಸಭೆ ಮುಂದಾಗಿತ್ತು. ಬಿಡಾಡಿ ದನಕರುಗಳನ್ನು ಹಿಡಿದು ಹಳಿಯಾಳ ತಾಲೂಕಿನ ದುಸಗಿಯ ಗೋಶಾಲೆಗೆ ರವಾನಿಸುವ ಕಾರ್ಯ ನಡೆದಿತ್ತು. ಚೌತಿ ಬಂದ ಹಿನ್ನಲೆಯಲ್ಲಿ ಬಿಡಾಡಿ ದನಕರುಗಳನ್ನು ದುಸಗಿಯ ಗೋಶಾಲೆಗೆ ಕಳುಹಿಸುವ ಕಾರ್ಯವನ್ನು ಸದ್ಯಕ್ಕೆ ಸ್ಥಗಿತಗೊಳಿಸಲಾಗಿದೆ.