ಕಳೆದ ಎರಡು ದಿನಗಳ ಹಿಂದೆ ಸುರಪುರ ನಗರದ ಅಂಬೇಡ್ಕರ್ ವೃತ್ತದ ಹಿಂಭಾಗದ ಸ್ಥಳಕ್ಕಾಗಿ ದಲಿತ ಸಂಘಟನೆಗಳ ಒಕ್ಕೂಟ ನಡೆಸುತ್ತಿರುವ ಧರಣಿಯಲ್ಲಿ ಭಾಗವಹಿಸಿದ್ದ ವಾಲ್ಮೀಕಿ ಸಮುದಾಯದ ಮುಖಂಡ ಹಾಗೂ ನಿವೃತ್ತ ಉಪನ್ಯಾಸಕ ವಾಸುದೇವ ಗಂಗಿ ಅವರು ಭಾನುವಾರ ಮಧ್ಯಾನ ಧರಣಿಯಲ್ಲಿ ಭಾಗವಹಿಸಿದ್ದರ ಕುರಿತು ಮರು ಹೇಳಿಕೆ ನೀಡಿದ್ದಾರೆ. ನನಗೆ ಮಾಹಿತಿ ಕೊರತೆಯಿಂದ ಧರಣಿಯಲ್ಲಿ ಭಾಗವಹಿಸಿದ್ದೆ, ನಾನು ಬದುಕಿರುವವರೆಗೂ ವಾಲ್ಮೀಕಿ ಸಮುದಾಯಕ್ಕಾಗಿ ಸೇವೆ ಮಾಡುತ್ತೇನೆ ಎಂದು ಭಾವುಕರಾಗಿ ಹೇಳಿಕೆ ನೀಡಿದರು.