ಕೆಸರು ಮೆತ್ತಿದ್ದ ಕಾಲು ತೊಳೆಯಲೆಂದು ನಾಲೆಗೆ ಇಳಿದಿದ್ದ ಮಹಿಳೆ ಕಾಲು ಜಾರಿ ಬಿದ್ದು ಮೃತಪಟ್ಟಿರುವ ಘಟನೆ ತಾಲ್ಲೂಕಿನ ಮಲ್ಲವನಘಟ್ಟ ಸಮೀಪ ನಡೆದಿದೆ. ಪಟ್ಟಣದ ಗಾಯತ್ರಿ ಬಡಾವಣೆ ನಿವಾಸಿ ಎಸ್.ಟಿ. ಸಾವಿತ್ರಮ(50) ಮೃತರು. ಎಲ್‌ಐಸಿ ಏಜೆಂಟರಾಗಿದ್ದ ಸಾವಿತ್ರಮ ಬುಧವಾರ ಬೆಳಿಗ್ಗೆ ಗೌಡಗೆರೆ ಹೊಸೂರು ಗ್ರಾಮಕ್ಕೆ ತಮ ದ್ವಿಚಕ್ರ ವಾಹನದಲ್ಲಿ ಕಾರ್ಯನಿಮಿತ್ತ ತೆರಳಿದ್ದರು. ಕೆಲಸ ಮುಗಿಸಿ ವಾಪಾಸ್ ಬರುತ್ತಿದ್ದಾಗ ಕಾಲಿಗೆ ಕೆಸರು ಮೆತ್ತಿಕೊಂಡಿದ್ದು ಅದನ್ನು ತೊಳೆದುಕೊಳ್ಳಲೆಂದು ಮಲ್ಲವ್ವನಘಟ್ಟ ಬಳಿ ಗಾಡಿ ನಿಲ್ಲಿಸಿ ನಾಲೆಯ ತಿರುವಿನ ಸಿಮೆಂಟ್ ಇಳಿಜಾರಿಗೆ ತೆರಳಿದ್ದರು.ಕಾಲು ಜಾರಿ ನೀರಿಗೆ ಬಿದ್ದಿದ್ದರು. ಪತಿ ನಾಗರಾಜ್ ಹಾಗು ಸಂಬಂಧಿಕರು ಹುಡುಕಾಟಕ್ಕಾಗಿ ಹೊಸೂರು ಕಡೆಗೆ