ಕಲಬುರಗಿ : ತಲತಲಾಂತರದಿಂದ ನಾಡಿನಾದ್ಯಂತ ಬುಡಕಟ್ಟು ಸಮುದಾಯಗಳಲ್ಲಿ ಬರುವ ಕೋಲಿ, ಬೆಸ್ತ, ಟೋಕರೆ, ತಳವಾರ ಜನಾಂಗದವರು ಜೋಕುಮಾರ ಸ್ವಾಮಿನ ಪೂಜೆ ಮತ್ತು ಆರಾಧನೆ ಮಾಡ್ತಾ ಬಂದಿದ್ದು, ಸದ್ಯ ಈ ಸಮುದಾಯಗಳಿಗೆ ಸರ್ಕಾರದಿಂದ ಯಾವುದೇ ಸೌಲಭ್ಯಗಳು ದೊರಕುತ್ತಿಲ್ಲ.. ಹಾಗಾಗಿ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬುಡಕಟ್ಟು ಸಮುದಾಯಗಳ ಸಾಂಸ್ಕೃತಿಕ ಸಾಹಿತ್ಯ ಪರಿಷತ್ತು ವತಿಯಿಂದ ಕಲಬುರಗಿಯಲ್ಲಿ ಪ್ರತಿಭಟನೆ ನಡೆಸಲಾಗಿದೆ.. ಸೆ4 ರಂದು ಮಧ್ಯಾನ 12 ಗಂಟೆಗೆ ನಗರದ ಡಿಸಿ ಕಚೇರಿ ಬಳಿ ಪ್ರತಿಭಟನೆ ನಡೆಸಿದರು. ಜೋಕುಮಾರ ಸ್ವಾಮಿ ಆರಾಧನೆ ಮಾಡುವ ಗ್ರಾಮಗಳಿಗೆ ವಾರ್ಷಿಕ ₹51 ಸಾವಿರ ಗೌರವಧನ ನೀಡಬೇಕು, ಜನಾಂಗಕ್ಕೆ ಸಂವಿಧಾನ ಬದ್ದವಾಗಿ ಸಿಗಬೇಕಾದ ಸೌಕರ್ಯಗಳನ್ನ ನೀಡಬೇಕು, ಪ್ರತಿತಿಂಗಳು ಮಾಶ್ಯಾಸನ ನೀಡಬೇಕೆಂದು ಡಿಸಿ ಮೂಲಕ ಸರ್ಕಾರ