ಶನಿವಾರ ದಾವಣಗೆರೆಯಲ್ಲಿ ಮಾದಿಗ ಮಹಾಸಭಾದಿಂದ ಆಯೋಜಿಸಿರುವ ಒಳಮೀಸಲಾತಿ ವಿಜಯೋತ್ಸವ ಕಾರ್ಯಕ್ರಮಕ್ಕೆ ತಾಲ್ಲೂಕಿನ ಮಾದಿಗ ಸಮಾಜದ ಬಂಧುಗಳು ಅತ್ಯಧಿಕ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮಾದಿಗ ಸಮಾಜದ ಅಧ್ಯಕ್ಷ ಜಿ.ಶಂಭುಲಿAಗಪ್ಪ ಕರೆ ನೀಡಿದರು. ಗುರುವಾರ ದಾವಣಗೆರೆ ಜಿಲ್ಲೆಯ ಜಗಳೂರು ಪಟ್ಟಣದ ಪತ್ರಿಕಾಭವನದಲ್ಲಿ ಮಾದಿಗ ಸಮಾಜದಿಂದ ನಡೆಸಿದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು. ನಾಲ್ಕು ದಶಕಗಳಕಾಲ ಒಳಮೀಸಲಾತಿಗಾಗಿ ಮಾದಿಗಸಮಾಜದ ಇಚ್ಛಾಶಕ್ತಿಯಿಂದ ಹಗಲಿರುಳು ಹೋರಾಟ ನಡೆಸಿ, ಶ್ರಮಿಸಿದ ಮಾಜಿ ಸಚಿವರಾದ ನಾರಾಯಣಸ್ವಾಮಿ, ಹೆಚ್.ಆಂಜನೇಯ, ಬಿ.ಎನ್.ಚಂದ್ರಪ್ಪ, ಗೋವಿಂದ ಕಾರಜೋಳ, ಸಚಿವರಾದ ಕೆ.ಎಚ್.ಮುನಿಯಪ್ಪ, ಆರ್ ಜೆ.ತಿಮ್ಮಾಪುರ್ ಸೇರಿದಂತೆ ಶಾಸಕರು, ಸಮಾಜದ ಗಣ್ಯರಿಗೆ ಸನ್ಮಾನಿಸಲಾಗುವುದು ಎಂದರು.