ತುಮಕೂರು ಜಿಲ್ಲೆಯಲ್ಲಿ 2796 ಗಣೇಶ ವಿಗ್ರಹಗಳ ಪ್ರತಿಷ್ಠಾಪನೆ ಮಾಡಲಾಗುತ್ತಿದೆ.ಈ ಬಾರಿ ಪ್ರತಿ ಗಣೇಶ ಪೆಂಡಾಲ್ ಗೂ ಓರ್ವ ಪೊಲೀಸ್ ಸಿಬ್ಬಂದಿ ನೇಮಕ ಮಾಡಲಾಗುತ್ತಿದೆ ಎಂದು ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕೆ. ವಿ. ಅಶೋಕ್ ಹೇಳಿದರು. ಅವರು ತುಮಕೂರು ನಗರದ ತಮ್ಮ ಕಚೇರಿಯಲ್ಲಿ ಮಾತನಾಡಿರುವ ವಿಡಿಯೋವನ್ನ ಮಾಧ್ಯಮಗಳಿಗೆ ಮಂಗಳವಾರ ಮಧ್ಯಾಹ್ನ3.55 ರ ಸಮಯದಲ್ಲಿ ಬಿಡುಗಡೆ ಮಾಡಿದ್ದಾರೆ. ಸೆಪ್ಟೆಂಬರ್ 5 ರಂದು ಈದ್ ಮಿಲಾದ್ ಕೂಡ ಆಚರಣೆ ಇರುವುದರಿಂದ ಶಾಂತಿ ಸಭೆಯನ್ನ ಸಹ ನಡೆಸಿದ್ದೇವೆ.ಪ್ರತಿ ಗಣೇಶ್ ಪೆಂಡಾಲ್ ನಿಂದ ವಿಸರ್ಜನೆ ಮೆರವಣಿಗೆ ತೆರಳುವ ಸಂದರ್ಭದಲ್ಲಿ ಪೋಲಿಸರ ಮೇಲ್ವಿಚಾರಣೆಯಲ್ಲಿ ಸಾಗಬೇಕಿದೆ ಎಂದರು.