ಮಹಾತ್ಮಾ ಗಾಂಧಿ ಜಾತಿಗಳ ಮಧ್ಯೆ ಇರುವ ಅಂತರ ಕಡಿಮೆ ಮಾಡಲು ಪ್ರಯತ್ನಿಸಿದರು ಎಂದು ಹಿರಿಯ ಚಿಂತಕ ಡಾ.ಸಂಜೀವ ಕುಲಕರ್ಣಿ ಹೇಳಿದರು. ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದ ರಾ. ಹ. ದೇಶಪಾಂಡೆ ಸಭಾಂಗಣದಲ್ಲಿ ಭಾನುವಾರ ಸಂಜೆ 6 ಗಂಟೆಗೆ ನಡೆದ "ಗಾಂಧಿ: ಜಾತಿ, ಮತ ಹಾಗೂ ಧರ್ಮ' ಕುರಿತು ಉಪನ್ಯಾಸ ನೀಡಿದ ಅವರು, ಜೀವನದುದ್ದಕ್ಕೂ ಜಾತಿ ಪದ್ಧತಿ ನಿರ್ಮೂಲನೆಗೆ ಯತ್ನಿಸಿದ ಮಹಾತ್ಮಾ ಗಾಂಧಿ, ಉಪದೇಶಕ್ಕೆ ಸೀಮಿತಗೊಳಿಸದೇ ಅನುಷ್ಠಾನಕ್ಕೆ ತಂದು ಪರಿವರ್ತನೆ