ಶನಿವಾರ ಸಂಜೆ 4ಕ್ಕೆ ಜಿಲ್ಲಾಡಳಿತಕ್ಕೆ ಜನಶಕ್ತಿ ವೇದಿಕೆಯಿಂದ ಮನವಿ ಸಲ್ಲಿಸಲಾಗಿದ್ದು ಪತಿಯ ಸಾವಿನ ನಂತರ ವಿಧವಾ ಮಹಿಳೆಯರ ಮೇಲೆ ನಡೆಯುತ್ತಿರುವ ಅನಿಷ್ಟ ಪದ್ಧತಿಗಳ ವಿರುದ್ಧ ಜನಶಕ್ತಿ ವೇದಿಕೆ, ಉತ್ತರಕನ್ನಡ ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದೆ. ಪತ್ರದಲ್ಲಿ, ವಿಧವೆಯರ ಕೇಶ ಮುಂಡನ, ಬಳೆ ಒಡೆಯುವುದು, ಕುಂಕುಮ ಅಳಿಸುವುದು ಸೇರಿದಂತೆ ಹಲವು ದೌರ್ಜನ್ಯಗಳನ್ನು ನಿಲ್ಲಿಸಲು ಸರ್ಕಾರ ಕೂಡಲೇ ಜನಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಒತ್ತಾಯಿಸಲಾಗಿದೆ.