ನಾರಾಯಣಪುರ ಜಲಾಶಯದಿಂದ ಕೃಷ್ಣಾ ನದಿಗೆ 2.10 ಲಕ್ಷಕ್ಕೆ ನೀರು ಬಿಟ್ಟಿರುವುದರಿಂದ ಲಿಂಗಸುಗೂರ ತಾಲೂಕಿನ ಕೃಷ್ಣ ನದಿಯಲ್ಲಿನ ದ್ವೀಪಗಳಾದ ಕರಕಲಗಡ್ಡಿ,ಮಾದರಗಡ್ಡಿ,ವೆಂಕಮ್ಮಗಡ್ಡಿಯ ಅನೇಕ ಕುಟುಂಬಗಳ ಜನರು ಇತ್ತ ಬರಲಾಗದೆ ಅಲ್ಲಿಯೇ ವಾಸಿಸುವಂತಾಗಿದೆ. ಪ್ರವಾಹ ಸ್ಥಿತಿಯಿಂದಾಗಿ ತೆಪ್ಪ ಬೋಟ್‍ಗಳ ಮೂಲಕ ತೆರಳಲು ಸಾಧ್ಯವಾಗದೆ ಇತ್ತ ಪಟ್ಟಕ್ಕೆ ಬಂದಿರುವವರು ಇಲ್ಲಿಯೇ ಉಳಿದುಕೊಳ್ಳುವಂತಾಗಿದೆ. ಅಲ್ಲಿರುವಂತ ಜನರಿಗೆ ಆರೋಗ್ಯದ ಸಮಸ್ಯೆ ಉಂಟಾದಲ್ಲಿ ಅಲ್ಲಿಗೆ ತಲುಪಲು ಸಾಧ್ಯವಾಗದೆ ಪರದಾಡುವಂಥ ಸ್ಥಿತಿ ನಿರ್ಮಾಣವಾಗಲಿದೆ.