ವಿಜಯಪುರ ಜಿಲ್ಲೆಯ ಭೀಮಾತೀರದಲ್ಲಿ ಭಾರಿ ಮಳೆ ಸುರಿಯುತ್ತಿದೆ. ಧಾರಾಕಾರ ಮಳೆಯ ಪರಿಣಾಮ ಅದರಲ್ಲೂ ಚಡಚಣ ಪಟ್ಟಣದಲ್ಲಿ ಅಪಾರ ಯೂರಿಯಾ ಗೊಬ್ಬರ ನೀರು ಪಾಲಾಗಿದೆ. ಕೊರಮಂಡಲ ಕಂಪನಿಯ ಔಟ್ ಲೇಟ್ ಗೋಡವನ್ ಗೆ ನೀರು ನುಗ್ಗಿದ್ದು ಬರೊಬ್ಬರಿ 7 ಲಕ್ಷ ಮೌಲ್ಯದ ರಾಸಾಯನಿಕ ಗೊಬ್ಬರ ನೀರಲ್ಲಿ ಹೋಮವಾಗಿದೆ. 2 ಸಾವಿರಕ್ಕು ಅಧಿಕ ಗೊಬ್ಬರ ಪ್ಯಾಕೇಟ್‌ಗಳನ್ನ ಇಡಲಾಗಿತ್ತು, ಇದರಲ್ಲಿ 600 ಪ್ಯಾಕೇಟ್ ಸಂಪೂರ್ಣವಾಗಿ ನೀರಲ್ಲಿ ಹಾಳಾಗಿವೆ...