ಗಣೇಶೋತ್ಸವದಲ್ಲಿ ಡಿ.ಜೆ ಕುರಿತು ಬಿಜೆಪಿ ಅವರು ಏನೇನೋ ಹೇಳುತ್ತಾರೆ ಅದು ಸುಳ್ಳು ಕೋರ್ಟ ಆದೇಶದಂತೆ ಡೆಸಿಬಲ್ ಪ್ರಕಾರ ಡಿಜೆ ಬಳಸಲು ಅವಕಾಶ ಇದೆ ಎಂದು ಕೊಪ್ಪಳ ಜಿಲ್ಲೆಯ ಉಸ್ತುವಾರಿ ಸಚಿವರು ಮತ್ತು ಕನ್ನಡ ಸಂಸ್ಕೃತಿ ಇಲಾಖೆಯ ಸಚಿವ ಶಿವರಾಜ ತಂಗಡಗಿ ಹೇಳಿದರು. ಆಗಸ್ಟ್ 25 ರಂದು ಮಧ್ಯಾಹ್ನ 3-00 ಗಂಟೆಗೆ ಕನಕಗಿರಿ ಪಟ್ಟಣದಲ್ಲಿ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ 18 ವರ್ಷದ ಯುವಕರಿಗೆ ಮತದಾನದ ಹಕ್ಕು ನೀಡಿದ್ದು ಕಾಂಗ್ರೆಸ್ ಪಕ್ಷ ಎಂದು ಹೇಳಿದರು