ಯಾದಗಿರಿ ಜಿಲ್ಲೆಯ ಸುರಪುರ ನಗರದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ವೃತ್ತದ ಹಿಂಭಾಗದಲ್ಲಿನ ಸರ್ವೆ ನಂಬರ್ 7/1ರಲ್ಲಿರುವ ಭೂ ವಿವಾದವನ್ನು ಇತ್ಯರ್ಥ ಪಡಿಸುವಂತೆ ಆಗ್ರಹಿಸಿ ದಲಿತ ಸಂಘಟನಾ ಸೇನೆ ಸುರಪುರ ತಾಲೂಕ ಘಟಕದಿಂದ ಕೆಂಭಾವಿ ಪಟ್ಟಣದ ಉಪ ತಹಸಿಲ್ದಾರ್ ಕಚೇರಿಯ ಮುಂದೆ ಸಾಂಕೇತಿಕ ಪ್ರತಿಭಟನೆ ನಡೆಸಿ ಒತ್ತಾಯಿಸಲಾಗಿದೆ. ಸಂಘದ ತಾಲೂಕ ಅಧ್ಯಕ್ಷ ಬಸವರಾಜ ಕಂಬಾರ್ ಮಾತನಾಡಿ, ಅಂಬೇಡ್ಕರ್ ವೃತ್ತದ ಹಿಂಭಾಗದಲ್ಲಿ ಖಾರಿಜ್ ಖಾತಾ ಭೂಮಿಗಾಗಿ ಎರಡು ಪ್ರಬಲ ಸಮುದಾಯಗಳ ಮಧ್ಯೆ ವಿವಾದ ಏರ್ಪಡುತ್ತಿದ್ದು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಗಳು ಮಧ್ಯಪ್ರವೇಶಿಸಿ ಪ್ರಕರಣವನ್ನು ಇತ್ಯರ್ಥ ಗೊಳಿಸುವಂತೆ ಒತ್ತಾಯಿಸಿದರು.ಜಿಲ್ಲಾಧಿಕಾರಿಗಳಿಗೆ ಬರೆದ ಮನವಿ ಉಪ ತಹಸಿಲ್ದಾರ್ ಮೂಲಕ ಸಲ್ಲಿಸಿದರು.