ಲೋಕ ಕಲ್ಯಾಣಕ್ಕಾಗಿ ಸ್ವಾಮಿಜಿಯೊಬ್ಬರು ಮರದ ಮೇಲೆ ದ್ಯಾನಕ್ಕೆ ಕುಳಿತ ಘಟನೆ ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಮುಷ್ಟುರು ಗ್ರಾಮದ ಬರಗಾಲ ಸಿದ್ದಪ್ಪನ ಮಠದಲ್ಲಿ ನಡೆದಿದೆ. ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಬಾದ್ಯಾಪುರದ ಸಚ್ಚಿದಾನಂದ ಶ್ರೀ ಸ್ವಾಮಿಜಿ , ಮಠದ ಆವರಣದಲಿರೋ ಮಾವಿನ ಮರದ ಮೇಲೆ ಟೆಂಟ್ ಹಾಕಿಕೊಂಡು 5 ದಿನಗಳಿಂದ ದ್ಯಾನಕ್ಕೆ ಕುಳಿತಿದ್ದಾರೆ. 101 ದಿನಗಳ ವರೆಗೆ ಈ ದ್ಯಾನ ಮುಂದುವರೆಯಲಿದೆ. ದ್ಯಾನ ಮುಗಿಯೋ ವರೆಗೂ ಈ ಸ್ವಾಮಿಜಿ ಮೌನವಾಗಿರಲಿದ್ದಾರೆ...