ನ್ಯಾಷನಲ್ ಲೆವೆಲ್ ಕಬಡ್ಡಿ ಪ್ಲೇಯರ್ ಅಜ್ಜಂಪುರದ ಸಂಪತ್ ರಸ್ತೆ ಅಪಘಾತದಲ್ಲಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ಪಟ್ಟಣದ ನಿವಾಸಿ 27 ವರ್ಷದ ಸಂಪತ್ ನ್ಯಾಷನಲ್ ಲೆವೆಲ್ ಕಬ್ಬಡಿ ಪ್ಲೇಯರ್ ಆಗಿ ಗುರುತಿಸಿಕೊಂಡಿದ್ದು, ಸಾಕಷ್ಟು ಜನ ಮನ್ನಣೆ, ಪ್ರೀತಿ, ಗೌರವ, ಪ್ರಶಸ್ತಿಗಳನ್ನು ಕೂಡ ಗೆದ್ದುಕೊಂಡಿದ್ದರು. ಕಡೂರು ಬೀರೂರು ನಡುವೆ ಬೈಕ್ನಲ್ಲಿ ತೆರಳುತ್ತಿದ್ದಂತಹ ಸಂದರ್ಭದಲ್ಲಿ ಹಿಂಬದಿಯಿಂದ ಬಂದ ಕಾರು ಗುದ್ದಿದ ಪರಿಣಾಮವಾಗಿ ಸಂಪತ್ ನೆಲಕ್ಕೆ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸಂಪತ್ ಸಾವಿನಿಂದಾಗಿ ಸ್ನೇಹ ಬಳಗ ದುಃಖ ತಪ್ತವಾಗಿದೆ.