ಲವರ್ ಗಾಗಿ ಮುದ್ದೆಯಲ್ಲಿ ನಿದ್ದೆ ಮಾತ್ರೆ ಹಾಗೂ ವಿಷವನ್ನು ಹಾಕಿ ಅತ್ತೆಯನ್ನು ಕೊಲೆ ಮಾಡಿದ್ದ ಖತರ್ನಾಕ್ ಸೊಸೆ ಪೊಲೀಸರ ಅತಿಥಿಯಾಗಿದ್ದಾಳೆ. ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲೂಕಿನ ತಡಗ ಗ್ರಾಮದ ನಿವಾಸಿ 75 ವರ್ಷದ ದೇವಿರಮ್ಮ ಅವರು ಫುಡ್ ಪಾಯಿಸನ್ ಇಂದ ಮೃತಪಟ್ಟಿದ್ದಾರೆ ಎಂದು ನಂಬಿಸಿ ಅಂತ್ಯಕ್ರಿಯೆ ಮಾಡಿದ್ದ ಬಳಿಕ ಮನೆಯಲ್ಲಿ ನಡೆದಿದ್ದ ಕಳ್ಳತನದಿಂದಾಗಿ ಮೃತ ದೇವಿರಮ್ಮ ಅವರ ಮರ್ಡರ್ ಹಿಂದಿನ ಹಿಸ್ಟರಿ ಹಾಗೂ ನಿತ್ಯವೂ ಮನೆಯಲ್ಲಿ ಎಲ್ಲರಿಗೂ ನಿದ್ದೆ ಮಾತ್ರೆ ಹಾಕುತ್ತಿದ್ದ ಸೊಸೆ ಅಶ್ವಿನಿ ಹಾಗೂ ಆಕೆಯ ಪ್ರಿಯಕರ ಆಂಜನೇಯ ಸ್ವಾಮಿಯ ನಡುವಿನ ಅನೈತಿಕ ಸಂಬಂಧದ ಅಸಲೀಯತ್ತು ಹೊರ ಬಿದ್ದಿದೆ.